Wednesday, November 28, 2012

ಧರಣಿಯ ತಣಿಸುವ : 'ಶ್ರೇಷ್ಠ ಮದುಮಗಳು'

ಸಾಮಾನ್ಯವಾಗಿ ನಮ್ಮೆಲ್ಲರ 'ಕಲ್ಪನೆ'ಗಳು  ಕಾಲಕ್ರಮೇಣ ಮರೆಯಾಗುತ್ತವೆ  ಅಥವಾ  ಧೃಡ ನಂಬಿಕೆಯಾಗಿ ಪರಿವರ್ತನೆಗೊಳ್ಳುತ್ತವೆ.ಅಂತಹ ಕೆಲ ನಂಬಿಕೆಗಳು ಅಪ್ತವೆನಿಸಿಕೊಳ್ಳುತ್ತವೆ ವಾಸ್ತವವೆನಿಸತೊಡಗುತ್ತವೆ.ನನ್ನ ಅಂತದ್ದೊಂದು 'ಕಲ್ಪನೆಯಲ್ಲದ ನಂಬಿಕೆ,ವಾಸ್ತವವೆಂದು ನಂಬಿಕೊಂಡ  ಕಲ್ಪನೆ'ಯನ್ನು ಜನಪದ ಶೈಲಿಯ ಕವನಕ್ಕಿಳಿಸಲು ಪ್ರಯತ್ನಿಸಿದ್ದೇನೆ.

ಚಿತ್ರಕಲೆ : ವೈಶಾಲಿ ಶೇಷಪ್ಪ 


*ಶ್ರೇಷ್ಠ  ಮದುಮಗಳು *

ಮುಗಿಲೂರಿನ  ಮಗಳು
ಮನೆತುಂಬೋಕೆ ಹೊರಟಿಹಳು
ಗುಡುಗು  ಮಿಂಚಿನ 
ಹಿಮ್ಮೇಳದ  ಜೋಡಿ  
ಬೆಳೆಸಿಹಳು  
ರವಿ  ಚಂದ್ರರ  ಸಹೋದರಿ
ಇಳೆಯೆಡೆ  ತನ್ ಪಯಣ

ದೂರದೂರಿನ   ನಂಟು  
ದೂರ  ಮಾಡದಿರಲಿ  ಮನವ 
ಮುಗಿಯುವೆ  ಏನ್  ಕರವ
ಹರಸಿ ನೀಡಿರೆನಗೆ  ವಚನವ 
ಅಣ್ಣಂದಿರ,
ಚಿರಕಾಲ  ಕಾಯಲಿ  ನಿಮ್ಮನ್ನು
ನಮ್ಮನ್ನು   ಬೆಸೆದ 
ಬಂಧನದ  ಗಂಟು 

ಕೇಳು  ಮುದ್ದೂ ತಂಗಮ್ಮ
ಸವಿಂದಾಚೆಗೂ ಸಾವಿರ  ಕಾರ್ಯವಿರಲಿ,
ಹಗಲೊಡನೆ ರವಿ ಬರುವ...  
ಲಕ್ಷ  ಹೆಂಡಿರ  ಸಹವಾಸವಿರಲಿ,
ಅವರೊಡನೆಯೇ ನಾ ಬರುವೆ... 
ಅನುಗಾಲ ,  
ತವರಿನ  ಬಾಗಿಲಾಚೆಗೆ  ಬಗ್ಗಿ
ನಿನ್ನ  ಕಾಣೋಕೆ  ನಾವ್  ಬರುವೆವು  
ನಿನಗಿತ್ತ  ವಚನವ  ಉಳಿಸೇವು

ತಿಳಿ  ಕಪ್ಪು  ಅರಿವೇ  ತೊಟ್ಟು ,
ಗೆಳತಿಯರೆಲ್ಲಾ  ಒಂದೆಡೆ  ಸೇರಿರಲು ..
ತೇಲಿ  ಆಡಿದ  ದಿನಗಳ  ನೆನೆದು,  
ಬಾಚಿ  ತಬ್ಬಿ ಬೀಳ್ಕೊಡಲು
ಕಣ್ಣೀರ ನವ  ರೂಪ  ಧರಿಸಿದಳು ..
ಬಾನಂಗಳದಲಿ  ಮದುಮಗಳು
 

ಮುನ್ನಡೆಯಲು  ಗಾಳಿಯ  ಸಾರಥ್ಯದಲ್ಲಿ
ಗಗನದೂರಿನ  ಮಗಳ
ಧರೆ ಯೆಡೆಗಿನ  ಪಯಣ ..
ನಲಿದಳು ಪಡೆದು, 
ಹೊಸ  ಜನುಮವ ,"ಹನಿ" ರೂಪವ
ಜಾರಿದಳು  ಬಾನಿಂದ
ಭುವಿಯ  ಚೊಚ್ಚಲ  ಸೊಸೆಯಾಗಿ,
ಸೇರಿದಳು  ಪೃಥ್ವಿಯ  ಸಿರಿಯಾಗಿ

ಅವಳು  ಅವಳಾಗಿರೋ
ಕೆಲ  ಕ್ಷಣವ  ಹಂಬಲಿಸಿ ...
ಆಗಾಗ  ಬಸರಿನ  ನೆಪವೊಡ್ಡಿ ,
ಆವಿಯಾಗಿ  ತವರ  ಸೇರುವಳು
ಸಾವಿರ  "ಹನಿ -ಮುತ್ತು "ಗಳೊಂದಿಗೆ
ಧರೆ ಗೆ  ಮರಳುವಳು

ತವರಿನಲಿ "ಮೋಡವಾಗಿ"
ಅತ್ತೆ  ಮನೆಯಲಿ  "ನೀರಾಗಿ "
"ಹನಿ "ಯಾಗಿದ್ದಾಗ  ತಾನಾಗಿ
ತೀರ್ಥವಾಗಿ ,ಎಲ್ಲರ  ಜೀವ  ಜಲವಾಗಿ,
ಬದುಕುವಳು  ಪವಿತ್ರೆ  ಸಾರ್ಥಕವಾಗಿ!

14 comments:

  1. ವೈಶು ಅವರೇ ,
    ಹನಿ ಆವಿಯಾಗಿ ತವರ ಸೇರುತ್ತಾಳೆ ಅಬ್ಭಾ !
    ಅಂಥ ಕಲ್ಪನೆ ರೀ ...ಹೊಟ್ಟೆ ಕಿಚ್ಚಾಗ್ತಿದೆ :)
    ಎಷ್ಟು ಚಂದ ಬರಿತಿರಿ
    ಅಷ್ಟೇ ಸುಂದರ ಚಿತ್ರ ಅರಳಿಸ್ತಿರಿ
    ಆ ಹುಡುಗಿಗೆ ತವರ ಬಂಧ ಸಿಗಲಿ
    ಈ ಹುಡುಗಿ ಬರೆಯುತ್ತಿರಲಿ

    ReplyDelete
    Replies
    1. ಸ್ವರ್ಣಕ್ಕ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ನಿಮ್ಮಗೆ ನನ್ನ ವಂದನೆಗಳು.:-) ಬರುತ್ತಿರಿ ಸಲಹೆ ನೀಡುತ್ತಿರಿ.:-)

      Delete
  2. ತುಂಬಾ ಚೆನ್ನಾಗಿ ಬರೆದಿದ್ದೀರಿ. ಮಳೆಯನ್ನು ಮದುಮಗಳಾಗಿ ಭುವಿಯನ್ನು ಗಂದನಮನೆಯಾಗಿ , ಆಹ್ ಅದ್ಭುತ ಕಲ್ಪನೆ. ಬಹಳೇ ಇಷ್ಟವಾಯಿತು ಇಷ್ಟು ಚಂದದ ಬ್ಲಾಗನ್ನು ಇಲ್ಲ್ಲಿಯವರೆಗೆ ನೋಡದೇ ಇದ್ದದ್ದಕ್ಕೆ ಬೇಸರವಾಗುತ್ತಿದೆ ಎಂಬಷ್ಟರ ಮಟ್ಟಿಗೆ ಚೆನ್ನಾಗಿದೆ ಎಲ್ಲ ಪೋಸ್ಟುಗಳು. ಬರೆಯುತ್ತಿರಿ

    ReplyDelete
    Replies
    1. ಸುಬ್ರಹ್ಮಣ್ಯ ಖುಷಿಯಾಯ್ತು ನಿಮ್ಮ ಪ್ರತಿಕ್ರಿಯೆ ಓದಿ.ನಿಮ್ಮಗೆ ನನ್ನ ಬ್ಲಾಗ್ ಮನೆಗೆ ಸ್ವಾಗತ.ಧನ್ಯವಾದಗಳು.:-)

      Delete
  3. ಮಲೆಗಳಲ್ಲಿ ಮದು ಮಗಳು ಎಂದರು ಕುವೆಂಪು...
    ಬಾನಿಂದ ಭುವಿಗೆ ಇಳಿದಳು ಮದುಮಗಳು ಎಂದರು ಈ ಕವಿಯತ್ರಿ..
    ಎಂತಹ ಸುಂದರವಾಗಿ ಕಟ್ಟಿದ ಜೇನು ಗೂಡು..
    ಪ್ರತಿಯೊಂದು ಪದವು, ಸಾಲುಗಳು ಸಿಹಿ..ಮಧುರ ಅಮರ.
    ಸುಂದರವಾಗಿದೆ.ಅಭಿನಂದನೆಗಳು ಫ್ರೆಂಡ್..

    ReplyDelete
    Replies
    1. ಶ್ರೀ ಭೈಯ್ಯ ಮೆಚುಗೆಯ ನುಡಿಗಳಿಗೆ ಧನ್ಯವಾದಗಳು.ಬರುತ್ತಿರಿ ಸಲಹೆ ನೀಡುತ್ತಿರಿ.:-)

      Delete
  4. ಹೌದು, ನನಗೆ ನಿಜವಾಗಿಯೂ ಸಂದೇಹ.....ಇದು ಅದೇ ವೈಶು ನಾ????? ಕನ್ನಡ ಶಬ್ಧಗಳು ಸರಿಯಾಗಿ ನೆನಪಿರೋಲ್ಲ, ಬರೋಲ್ಲ ಎಂದು ಹೇಳುತಿದ್ದ ಹುಡುಗಿಯಾ? ಹುಡುಗಿಯರೆಲ್ಲ ಇವಳಿಗೆ ಕನ್ನಡ ಬರೋಲ್ಲ, ಇಂಗ್ಲಿಷ್ ನಲ್ಲೆ ಜಾಸ್ತಿ ಮಾತಾಡೋದು ಎಂದುಕೊಂಡು ಮಾತಾಡೋಕು ಹೆದರುತಿದ್ದ ರಲ್ಲಾ???

    ಮತ್ತೊಮ್ಮೆ ಅದೇ ಮಾತು.....''ಇಂತಹ ಕವನಗಳನ್ನು ನೀನು ಮಾತ್ರ ಬರೆಯಬಲ್ಲೆ''.........ಸುಂದರವಾದ ಉಪಮೆ, ರೂಪಕಗಳೊಂದಿಗೆ, ಕಲ್ಪನಾತೀತ ಕಲ್ಪನೆಗಳ ಹೂರಣದೊಂದಿಗೆ, ನಿನ್ನ ಶೈಲಿಗೆ ನೀನೆ ಸಾಟಿ ಎನ್ನುವಂತೆ ಮೂಡಿಬಂದ ಸೊಗಸಾದ ಬರಹ.......ಅಭಿನಂದನೆಗಳು......

    ReplyDelete
  5. ವೈಶಾಲಿ,
    ಅದ್ಭುತವಾದ ಕಲ್ಪನೆಗೆ ಮುದ್ದಾದ ಕವನ ಹೆಣೆದಿದ್ದೀರಿ. ನಿಮ್ಮ ಚಿತ್ರರಚನೆಯೂ ಸಹ ಚೆನ್ನಾಗಿದೆ. ನಿಮಗೆ ಅಭಿನಂದನೆಗಳು ಹಾಗು ನಿಮ್ಮ blogಅನ್ನು ನನಗೆ ಪರಿಚಯಿಸಿದ ಸ್ವರ್ಣಾ ಅವರಿಗೆ ನನ್ನ ಧನ್ಯವಾದಗಳು.

    ReplyDelete
    Replies
    1. ಉಫ್ ...!!! ಏನ್ ಹೇಳೋದು...? ಹೇಳೋದೆಲ್ಲಾ ಆವತ್ತೇ ಹೇಳಿ ಕೈ ತೊಳ್ಕೊಂಡಿದಿನಿ :D ;-) ಈ ಥರ ಬೆರೆಯೋಕೆ ನೀನಿಂದ ಮಾತ್ರ ಸಾಧ್ಯ. ನಿನ್ VISION ನ ರೀತಿಯೇ ಬೇರೆ :-) ;-) ಪ್ರತಿಯೊಂದು ಸಾಲುಗಳೂ.... ರೂಪಕಗಳೂ.... ಅಮೋಘವಾಗಿವೆ. ಹೀಗೇ ಬರೆಯುತ್ತಿರು :-)

      Delete
  6. ಅಟ್ ಲಾಸ್ಟ್ ನಿನ್ ಬ್ಲಾಗ್ ಕಡೆ ಬಂದಿದೀನಿ ನೋಡು ನಾ ಹಾಕ್ತಿರೋ ಕಾಮೆಂಟ್ ಸಾಕ್ಷಿಯಾಗಿರತ್ತೆ.


    ನಿನ್ನ ಶ್ರೇಷ್ಟ ಮದುಮಗಳು.. ಸೂರ್ಯ ಚಂದ್ರರು ಅವಳಿಗೆ ಸೋದರರಂತೆ.. ಹನಿಯಾಗಿ ಅವಳು ಮದುಮಗಳಾಗಿ ಇಳೆಯ ಸೇರುವುದು.. ಆವಿಯಾಗಿ ಮತ್ತೆ ತವರ ಸೇರುವುದು.. ಬಹಳವೇ ಉತ್ತಮ ರೂಪಕ ಗಳೊಡನೆ ತುಂಬಾ ಸುಂದರವಾಗಿ ಮೂಡಿ ಬಂದ ಕವನ.. ಹೀಗೆ ಬರಿತಾ ಇರು. :) :)

    ReplyDelete
  7. ಗ್ಯಾಪಲ್ ಹಂಗೇ , ಇನ್ನೊಂದ್ ಕಾಮೆಂಟ್ ಲೇ,....

    ಏನಂದ್ರೆ, ನೀನ್ ಬಿಡಿಸಿರೋವಂಥಾ ಆ ಚಿತ್ರದಲ್ಲಿರುವ ಹೆಣ್ಮಗಳು ಥೇಟ್ "ಸುಮನ್ ರಂಗನಾಥ್" ಥರಾನೇ ಇದಾಳೆ ;-) :D

    ReplyDelete
  8. ಅದ್ಬುತವಾದ ಕವನ ವೈಶುಜಿ...:) "ಶ್ರೇಷ್ಠ ಮಧುಮಗಳು" ಶೀರ್ಷಿಕೆಯಿಂದ ಹಿಡಿದು ಕೊನೆಯ ಸಾಲಿನವರೆಗೂ ಮತ್ತೆ ಮತ್ತೆ ಓದಬೇಕು ಅನ್ನಿಸುವ ಕವನ...

    ReplyDelete
  9. ಅನನ್ಯ ಶೈಲಿ ಬಳಕೆಯ ಕವಿಯೆ. ತುಸು ಜಾನಪದ ಲೇಪ.

    ಈ ಬ್ಲಾಗನ್ನು ಪೂರ್ತಿ ಓದಿದ ಮೇಲೆ ನನಗೆ ನೆಮ್ಮದಿ!

    ReplyDelete
  10. ಚಿತ್ರ ಇಷ್ಟವಾಯ್ತು...

    ReplyDelete