![]() |
ಚಿತ್ರಕಲೆ : ವೈಶಾಲಿ ಶೇಷಪ್ಪ |
ಕತ್ತಲಿನಲ್ಲಿಬ್ಬರು ಬೆಳಕಿನಲ್ಲೊಬ್ಬರು ಬೆತ್ತಲಾಗುವ ಆಟ
ಸತ್ಯ ನಂಬಿಕೆ ಎಂಬೆರಡರ ನಡುವಿನ ರಂಗಿನಾಟ
ಇರುಳು ಸರಿದಿತ್ತು ಹಗಲು ಮೂಡಿತ್ತು
ನಂಬಿಕೆಯೂ ಮರೆಯಾಗಿತ್ತು ಸತ್ಯ ಮರುಗಿತ್ತು
ಕುಸಿದ ಮೌಲ್ಯ ಮುರಿದ ಮನಸು ಬಿಡದ ಏಕಾಂತ
ಶ್ರಾವಣದ ಮಳೆ ಸುರಿದಿತ್ತು,ಮಿಂಚೊಂದು ಬಡಿದಿತ್ತು
ಹೊಸ ಚಿಗುರು,ಉಸಿರಿನಲ್ಲೊಂದು ಉಸಿರು,ಚಿಲಿಪಿಲಿ ಹಕ್ಕಿ
ಮರೆಯಾದ ಪ್ರೀತಿಯ ಸ್ವರೂಪ ಸೇರಿತು ಮಡಿಲಿನಲಿ
ಸಂಭ್ರಮಿಸಿದಳು ದಿವ್ಯ ಮೌನದಲಿ,ಸಮಾಜದ ಕಳಂಕಿನಿ!
ಚಂಚಲೆಯೆಂಬ ಚುಕ್ಕೆ ಇಟ್ಟವರೆಷ್ಟೋ
ಜಾರಿಣಿಯೆಂಬ ಗೆರೆಯ ಕೂಡಿಸಿದವರೆಷ್ಟೋ
ವಿಕೃತಿಯ ಚಿತ್ತಾರಕ್ಕೆ ಬಣ್ಣ ತುಂಬಿ
ಪರಿಮಿತಿಯ ಮೀರಿ ನಾಲಿಗೆಯ ಅಶುದ್ದ ಮಾಡಿಕೊಂಡವರೆಷ್ಟೋ
ಗೆಜ್ಜೆ ಕಟ್ಟಿ ಲಜ್ಜೆ ಬಿಟ್ಟಳೆಂದು ಸತ್ಯ'ಕ್ಕೆ ಸೂಳೆಯೆಂಬ ಅಲಂಕಾರದ ಟೀಕೆ
ನಂಬಿಕೆ'ಯೇ ನಿನಗೆ ಮಾತ್ರ ರಸಿಕ ಸೂಳೆ ಮಗನೆಂಬ ಕಿರೀಟವೇಕೆ
ನಿನ್ನಯ ಪತಿತತನ ಮರೆಮಾಚಲೂ ತಾಯಿಯೆಂಬ ಹೆಣ್ಣಿನ ಸೆರಗು ಬೇಕೆ
ಮನ ಬಂದಂತೆ ಪರರ ವ್ಯಕ್ತಿತ್ವಕ್ಕೆ ಕೆಸರೆರೆಚುವ ಚಪಲವೇಕೆ
ಈ ದೊಂಬರಾಟಕ್ಕೆ ಸಿಲುಕಿದ
ಜೀವವೊಂದು ಬಾಡಿ,ಪಿಸುಗುಟ್ಟಿತು
ನಂಬಿಕೆಯೆಂಬ ಅಪ್ಪನೆ
ನೀ ಜೋಡಿ ನಡೆದಿದ್ದರೆ
ಅನನ್ಯತೆ ಮೆರೆದ್ದಿದ್ದರೆ
ಸತ್ಯಯೆಂಬ ನನ್ನ ಅಮ್ಮನು
ಅನಿಸಿಕೊಳ್ಳುತ್ತಿದ್ದಳಲ್ಲವೇ ಪತಿಯ ಪತಿತೆ!
-ವೈಶಾಲಿ ಶೇಷಪ್ಪ
Superb!!! Sensitive...chitrane kavana helutte.baritiru putta.awesome sketch!
ReplyDeleteಚಿಕ್ಕೂ ಇದು ನೀನಾ?ಮೆಚ್ಚಿದಕ್ಕೆ ಧನ್ಯವಾದಗಳು.....ಪ್ರೀತಿಯಿಂದ ವೈಶು.:-)
ReplyDeleteಚೆನಾಗಿದೆ..
ReplyDeleteಈ ತರಹದ ವಿಷಯಗಳನ್ನು ನಿರೂಪಿಸುವುದು ಚೂರು ಕಷ್ಟವೇನೋ...ಅದನ್ನು ಸಮರ್ಥವಾಗಿ ಬರಹಕ್ಕಿಳಿಸಿದ್ದೀರಿ...
ಒಂದಿಷ್ಟು ಹೊಸ ಶಬ್ಧಗಳನ್ನು ಕಲಿತೆ..
ಬರೆಯುತ್ತಿರಿ ....
ಚಿನ್ಮಯ್ ಮೆಚುಗೆಗೆ ಧನ್ಯವಾದಗಳು .......ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.:-)
Deleteಚಂದದ ಚಿತ್ರ . ಅಮ್ಮನೆಂಬುದು ಸತ್ಯ, ತಂದೆ ಎಂಬುದು ನಂಬಿಕೆ
ReplyDeleteಎಂಬ ವಾಕ್ಯವನ್ನು ಕವನಕ್ಕಿಳಿಸಿದ ರೀತಿ 'effective' ಆಗಿದೆ
ಬರೆಯುತ್ತಿರಿ & ಬಿಡಿಸುತ್ತಿರಿ
ಸ್ವರ್ಣ ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯ್ತು.ಕವನ ಚಿತ್ರ ಎರಡನ್ನು ಮೆಚ್ಚಿ ಪ್ರೋತ್ಸಾಹಿಸಿದ್ದೀರಿ.ಧನ್ಯವಾದಗಳು.:-)
Deleteನೂರು ಸಾಲುಗಳಲ್ಲಿ ಹೇಳಬಹುದಾದನ್ನ 1 ಚಿತ್ರದಲ್ಲಿ ಹೇಳಬಹುದಂತೆ..!! ಆ ದಿಕ್ಕಿನಲ್ಲೇ ಬಹುಪಾಲು ಯಶಸ್ವಿಯಾದ ನಿನ್ನ ಚಿತ್ರಕಲೆ, ಹಿಡಿಸಿತು :) ಈ ತರಹದ ಬರಹಗಳನ್ನ ಬರೆಯುವುದು ತುಂಬಾ ಕಷ್ಟಸಾಧ್ಯ. ಪದಗಳಲ್ಲಿ, ನಿರೂಪಣೆಯಲ್ಲಿ, ಮತ್ತು ಪರಿಕಲ್ಪನೆಯಲ್ಲಿ ಹೊಸತನವಿದೆ. ಇನ್ನೂ ಹೆಚ್ಹೆಚ್ಚು ಬರಿ. ಶುಭಾಶಯಗಳು :)
ReplyDeleteನಿನ್ನ ಪ್ರತಿಕ್ರಿಯೆಗಳು ಬರೆಯಲು ಉತ್ತೇಜನ ನೀಡುತ್ತೆ.ನಿನ್ನ ಸಲಹೆ ಪ್ರೋತ್ಸಾಹ ಹೀಗೆ ಇರಲಿ.ಧನ್ಯವಾದಗಳು.:-)
Deleteನೀನು ಇಷ್ಟು ಚೆನ್ನಾಗಿ ಚಿತ್ರನು ಬಿಡಿಸ್ತೀಯ???? ಸುಂದರ ಕವನಕ್ಕೆ ತಕ್ಕ ಸೊಗಸಾದ ಚಿತ್ರ.....ಇನ್ನೊಂದು ನಿನ್ನದೇ ಶೈಲಿಯ, ಭಿನ್ನವಾದ ಪರಿಕಲ್ಪನೆಯ, ಸುಂದರ ಪದಜೋಡನೆ ಯ ಸೊಗಸಾದ ಕವನ. ಕ್ಲಿಷ್ಟವಾದ ವಿಚಾರಗಳನ್ನು ಸುಲಭವಾಗಿ ಕವನದ ಸಾಲುಗಳಲ್ಲಿ ಸುಂದರವಾಗಿ ನಿರೂಪಿಸುವ ಕಲೆ ನಿನ್ನಲ್ಲಿದೆ....ಈ ಕಲೆ ನಿನ್ನನ್ನು ಬಲು ಮೇಲಕ್ಕೆ ಕೊಂಡೊಯ್ಯಲಿ ಎನ್ನುವ ಹಾರೈಕೆಯೊಂದಿಗೆ......
ReplyDeleteನಿನ್ನೊಲವಿನ ಅಗ್ರಜ......
ನಿನ್ನ ಈ ಕವನದ ಬಗ್ಗೆ ಈ ಮೊದಲೇ ಓರ್ಕುಟ್ ನಲ್ಲಿ.. 3K ನಲ್ಲಿ ಹೇಳಿ ಆಗಿದೆ. ಇದನ್ನ ನೀನೆ ಬರೆದದ್ದು ಅಂತ ಯಾವತ್ತಿಗೂ ನಾನು ಒಪ್ಪಿಕೊಳ್ಳೋಕೆ ಹಿಂದೆ ಮುಂದೆ ನೋಡುವಂತೆ ಮಾಡುವ ಅದ್ಭುತ ಕವನವಿದು. ನೀನಾಗೆ ಇದರ ಭಾವಾರ್ಥ ತಿಳಿಸುವ ವರೆಗೆ ನಂಗೆ ಬೇರೆಯದೇ ತರಹ ಅರ್ಥವಾಗಿದ್ದ ಭಿನ್ನ ಕವಿತೆ.. ನಿನ್ನ ಅನುಮಾನದಿಂದ ನೋಡೋ ಹಾಗೆ ಮಾಡಿದ ಮೊದಲ ಕವಿತೆ ಇದು.. ಹೀಗಿಬ್ಬರು ಕಳಂಕಿಣಿಯರು ಅನ್ನೋ ಒಂದು ಗಂಭೀರ ವಸ್ತುವಿನ ವಿಚಾರ ನಿನ್ನ ಕೈಲಿ ಮೊದಲ ಕವನ ವಾಗಿ ಅದೂ ಇಷ್ಟು ಅದ್ಭುತವಾಗಿ ಮೈದಳೆದದ್ದು ಹೇಗೆ ಅಂತ.. ಕವನದ ಮಾತು ಬಿಡು.. ಫಾರ್ ಮೊರೆ ಡೀಟೇಲ್ಸ್ ಗೋ ಟು ಆರ್ಕುಟ್.. :P
ReplyDeleteಅಲ್ಲ ನೀ ಇಷ್ಟ್ ಚಂದಗೆ ಚಿತ್ರಾನು ಬಿಡಿಸ್ತೀಯ..?? unbeliavable.. good..:) :) ನಿನ್ನ ಬ್ಲಾಗಿನ ಪೋಸ್ಟ್ಗಳ ಅರ್ಥ & ಅಂದವನ್ನ ಹೆಚ್ಚಿಸೋದ್ರಲ್ಲಿ ಚಿತ್ರಗಳೂ ಕೂಡ ಪ್ರಮುಖ ಪಾತ್ರ ವಹಿಸ್ಥಾವೆ ಅಂದ್ರೆ ನೀನು ನಂಬಲೇ ಬೇಕು . ಅಷ್ಟು ಮುದ್ದು ಮುದ್ದು ಚಿತ್ರಗಳು. ಅದರಲ್ಲೂ ನಿನ್ನ ಈ ಚಿತ್ರಕ್ಕೆ Hats off ಅಷ್ಟೇ