Saturday, November 3, 2012

ಸಾವಿಲ್ಲದ್ದು

ನನ್ನ ಹುಟ್ಟು ತುಂಬಾ ನಿರೀಕ್ಷಿತವಾದದ್ದು,ಆದರೆ ಯಾವ ಆದರದ ಸ್ವಾಗತವು ಅದರ ಪಾಲಿಗಿರಲಿಲ್ಲ!

ಸ್ವಾಗತದ ವೈಭವವೇನು ಬೇಕಿರಲಿಲ್ಲ, ನಾನುಟ್ಟಿದ್ದು ಇವರಿಗೆ ಗೋಚರಿಸಿದರೆ ಸಾಕಿತ್ತು ಅಂದೆನಗೆ!

ಯಾಕಂದರೆ ನನಗೂ  ಮನವರಿಕೆಯಾಗಿತ್ತು...... ಅವಳ ಕೊಂದು ನಾನು ಹುಟ್ಟಿದ್ದೆನಂತ!

ಆದರಿಂದಲೋ ಏನೋ ನಾ ಹುಟ್ಟಿದ ಗಳಿಗೆಯಿಂದಲೂ  ಕೇಳಿದ್ದು ಬರಿ ಅಕ್ರಂದನವೇ......

ಆದರೆ ನಾನೇನು ಮಾಡಲಿ...........ವಿಧಿ ನಿಯಮವೇ ಹಾಗಿರುವಾಗ?

ಅವಳಿರುವಾಗಲೇ  ನಾನು ಹುಟ್ಟುವಂತಿರಲಿಲ್ಲ!

ನಾ  ಬರೆಸಿ ಕೊಂಡು ಬಂದ ಭಾಗ್ಯವೇ ಇಷ್ಟು,ಅಂತ ಬೇಜಾರಾಗುತ್ತಿತ್ತು  ಒಮ್ಮೊಮ್ಮೆ!

ಅಂದು ಎಲ್ಲರೂ ಕೂಗಿ ಕೂಗಿ ನನ್ನ ಹುಟ್ಟನ್ನು ಶಪಿಸುತ್ತಿದ್ದಾಗ  ನನಗೂ  ಜೋರು ಅಳು ಬರುತಿತ್ತು....

ಆದರೆ ನಾನವಳoತಲ್ಲ! ಹುಟ್ಟಿದಾಕ್ಷಣ ಹಾಗೆಲ್ಲ ರಂಪ ರಾಮಾಯಣ ಮಾಡುವುದನ್ನ ವ್ಯರ್ಥ ಪ್ರಲಾಪಗಳ ನಡೆಸುವುದನ್ನ ಮೈಗೂಡಿಸಿಕೊಂಡವಳಲ್ಲ!

ನನ್ನ ಕಂಡರೆ ಇಲ್ಯಾರಿಗೂ ಆಗುತ್ತಿರಲಿಲ್ಲ! ಆಗಾಗ ಹೋದವಳ ನೆನಪಿಸಿಕೊಂಡು ಅಳ್ತಿದ್ರು.....

ಈ ತಾರತಮ್ಯದ ಗಾಳಿ ಹೆಚ್ಚಿದಂಗು ನನ್ನ ಉದರದಲಿನ ಬೆಂಕಿ ಧಗ ಧಗಿಸಿ ಉರಿಯುತ್ತಿತ್ತು!

ಆದರು ಉಸಿರೆತ್ತಲಿಲ್ಲ...ನೋವನ್ನು ಪ್ರದರ್ಶನಕ್ಕಿಡುವ ವ್ಯಕ್ತಿತ್ವ ನನ್ನದಾಗಿರಲಿಲ್ಲ... ನಾನವಳoತಲ್ಲ!

ದಿನ ಕಳೆದಂಗು ನಾನಿವರೆಲ್ಲರ ನೆನಪಿನಿಂದ ಮರೆಯಾಗುತ್ತಿದ್ದೆ....ಅವಳಿನ್ನು ಕೆಲವರ ಮನಸಿನಲಿ ತಣ್ಣಗೆ ಹಾಸಿಕೊಂಡು ಮಲಗಿದ್ದಳು!

ನನಗೀಗೆಲ್ಲ ಅಭ್ಯಾಸವಾಗಿ ಹೋಗಿದೆ ಮೊದಲಿನಂತೆ ಕೀಳರಿಮೆ ಕಾಡೋದಿಲ್ಲ..... ಜಿಗುಪ್ಸೆಯೂ ಮೂಡೋದಿಲ್ಲ...

ಎಲ್ಲಾ ಪಡೆದ ಅವಳು ಸಾಧಿಸಿದ್ದು ಕೆಲ ದಿನದ ಅವಳೆಸರಿನ ಸಂತಾಪದ ಕನವರಿಕೆಗಳನ್ನ...

ಯಾವುದನ್ನೂ ಪಡೆಯದ ನಾನು ನಿತ್ಯ ಸಂತಾಪದ ಸುಳಿಯಲ್ಲಿ ಸಿಕ್ಕಿ ಹುಟ್ಟಿನಿಂದಲೂ ಸತ್ತಂತ್ತಿದ್ದರು ಸಾಯದೆ ಉಳಿದ್ದಿದ್ದೆ ನನ್ನ  ಸಾಧನೆ!

ಇಂತಿ
ಮರಣ

6 comments:

  1. ವೈಶೂ, ನನ್ನ ಮೇಲೆ ತುಂಬಾ ಪ್ರಭಾವ ಬೀರಿದ ಬರಹವಿದು.ತುಂಬಾ ಹಿಂದೇನೇ ಓದಿದ್ದೆ. but ಅವಾಗ ನೀನು ಕೊನೆಯಲ್ಲಿ "ಮರಣ" ಅಂತಾ ಸೂಚಿಸಿರಲಿಲ್ಲ, so ಇದು "ವಿಧವಾ-ಪಟ್ಟ" & "ಸುಮಂಗಲೆ" ಯಾ ನಡುವಿನ ಭಾವಸಂಘರ್ಷವೆಂದೆ ಪರಿಗಣಿಸಿದ್ದೆ. ಆಮೇಲೆ ನೀನದರ ಅರ್ಥವನ್ನ ಬಿಡಿಸಿಟ್ಟಿದ್ದು, ಆ ಸಾವಿನ ಭಾವನೆಗಳು ನನ್ನ ಮೇಲೆ ಬೀರಿದ ಪರಿಣಾಮಗಳು, ಅದರಿಂದಾ ನಾನೇನೋ ಬರೆದದ್ದು ಇವಾಗ ಇತಿಹಾಸ :-) ಇಂಥಹ ಒಂದು ಮನಸಿನಾಳಕೆ ಇಳಿಯುವ ಬರಹ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ :-) spelling -mistakes ಭಾಳ್ ಅದಾವ್ ನೋಡ್ಲೇ . :D

    ReplyDelete
  2. ರಾಗಾ ಹೌದು ! ನಾನು ಬರೆಯೋದು ಹೆಚ್ಚಿನವರಿಗೆ ಅರ್ಥವೇ ಆಗುವುದಿಲ್ಲ.:( "ವಿಧವಾ-ಪಟ್ಟ" & "ಸುಮಂಗಲೆ"....ನಿಜಕ್ಕೂ ನಿನ್ನ ಗ್ರಹಿಕೆಯೂ "ಜನನ -ಮರಣ"ದಷ್ಟೇ ಸಾಂದರ್ಭಿಕ ಹಾಗು ಅರ್ಥಪೂರ್ಣವಾಗಿ ಹೊಂದಿಕೊಳುತ್ತೆ.ನನ್ನೀ ಬರಹದ ಮತ್ತೊಂದು ಆಯಾಮ ಪರಿಚಯಿಸಿದ ನಿನಗೆ ಧನ್ಯವಾದಗಳು.:-)ನನ್ನ ಪ್ರತಿ ಬರಹ ಕವನಗಳಲ್ಲಿನ ಜೊಳ್ಳು-ಗಟ್ಟಿ ಕಾಳು ಗುರುತಿಸಿ ಅದಕ್ಕನುಗುಣ ಸಲಹೆ-ಮೆಚ್ಚುಗೆ ನೀಡಿ ಪ್ರೋತ್ಸಹಿಸುತಿರೋ ನಿನಗೆ ನಾನು ಋಣಿ.:-)

    ReplyDelete
  3. ಮರಣದೊಳಗಿನ ಅಂತಃಕರಣವನ್ನು ನಿಮ್ಮ ಕಲ್ಪನೆಯ ಚರಣದಲ್ಲಿ ವಿವರಿಸಿದ್ದೀರಿ ತುಂಬಾ ಚನ್ನಾಗಿದೆ .

    ReplyDelete
  4. ಸತೀಶ್ : ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು :)

    ReplyDelete
  5. ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು...ಇದು ಒಂದು ಗೀತೆಯಲ್ಲಿ ಬರುವ ಸಾಲು...ಜನನ ಒಂದು ಮಿಥ್ಯ ಸತ್ಯವಾದರೆ..ಮರಣ ಒಂದು ನಂಬಲೇಬೇಕಾದ ಕಹಿ ಸತ್ಯ...ಆ ಕಹಿ ಸತ್ಯದ ಬಾಯಿಂದಲೇ ಆ ಪದಗಳನ್ನು ಹೊರಹೊಮ್ಮಿಸಿರುವ ಶೈಲಿ ಸೊಗಸಾಗಿದೆ.

    ReplyDelete
  6. This is what i really expected from u sis.......Really really liked....

    ಯಾವಗಲೂ ನಮ್ಮ ಬರಹಗಳಲ್ಲಿ ಹೊಸತನವಿರಬೇಕೆಂದು ಬಯಸುವವನು ನಾನು..,,ಏನಾದರೂ ವಿಭಿನ್ನವಾಗಿರಬೇಕು....ಈ ನಿನ್ನ ಬರಹ ನನ್ನ ಇಂತಹ ಬರಹಗಳ ಹುಡು ಕಾಟಕ್ಕೊಂದು ಉತ್ತರ. ಹುಟ್ಟು ಸಾವುಗಳು ಸಹಜ ಕ್ರೀಯೆಗಳು....ಹುಟ್ಟಿನ ಬಗ್ಗೆ ಕವನಗಳನ್ನು, ಲೇಖನಗಳನ್ನು ಓದಿದ್ದೇವೆ . ಆದರೆ ಮರಣ ತನ್ನ ಬಗ್ಗೆ ಮಾತಾಡುವ ಕಲ್ಪನೆಯೇ ಒಂದು ವಿಭಿನ್ನ ಕಲ್ಪನೆ. "ಯಾವುದನ್ನೂ ಪಡೆಯದ ನಾನು ನಿತ್ಯ ಸಂತಾಪದ ಸುಳಿಯಲ್ಲಿ ಸಿಕ್ಕಿ ಹುಟ್ಟಿನಿಂದಲೂ ಸತ್ತಂತ್ತಿದ್ದರು ಸಾಯದೆ ಉಳಿದ್ದಿದ್ದೆ ನನ್ನ ಸಾಧನೆ! " ಎಷ್ಟೊಂದು ಅರ್ಥಪೂರ್ಣ ............ನಾನು ಓದಿದ ಕೆಲವು ಉತ್ತಮ ಬರಹಗಳಲ್ಲಿ ಒಂದು ಎಂದರೆ ದೊಡ್ಡ ಮಾತಲ್ಲ....ಇಂತಹ ವಿಭಿನ್ನ ಶೈಲಿಯ ಬರಹಗಳು ಹೆಚ್ಚು ಹೆಚ್ಚು ನಿನ್ನ ಬ್ಲಾಗನ್ನು ಅಲಂಕರಿಸಲಿ.....ಅಭಿನ೦ದನೆಗಳು ತಂಗಿ.....

    ReplyDelete