Saturday, January 5, 2013

ಹಳತು : ಹನಿಮುತ್ತು.....

ಮುನ್ನುಡಿ

ಕಡಲ ತೀರದ  ಬಳಿ ಹಾಗೆಲ್ಲ ಹರವಿ ಕೂರುವಂತಿಲ್ಲ.ಸುತ್ತು ಊರಗಲ ಮರಳಿನ ರಾಶಿ ಶಾಕ ಹೆಚ್ಚಿಸುತ್ತದೆ ಹರಿದು ಬರುವ ನೀರು  ತನ್ನ ಕಾಲಂಚಿಗೆ ಸಿಕ್ಕಿದ್ದೆಲ್ಲವನ್ನೂ ತೇವಗೊಳಿಸಿಬಿಡುತ್ತದೆ.ಆದರೆ ಇವಳು ಮಾತ್ರ ಇನ್ನು ಅಲ್ಲಿಯೇ ಗಟ್ಟಿ ನಿಂತಿದ್ದಾಳೆ  ಬಂಡೆಗಳೊಂದಿಗೆ ಸ್ಪರ್ಧೆಗಿಳಿದವಳಂತೆ.ವರ್ಷಗಳ ನೀರಿನ ಹರಿತ ಅವಳನ್ನೊಂದಿಂಚು ಕರಗಿಸಿಲ್ಲ.ಗಳಿಗಳಿಗೆ  ಅಂತರಂಗವ
ಅಲೆ ಅಲೆಯಾಗಿ ಸ್ಪರ್ಶಿಸುತ್ತಿರುವ ಈ ಕಡಿಲಿಗಿರೋ ಅಂತಃಕರಣ ನಿನಗಿಲ್ಲವಾಯಿತು ಎಂದು ಅವಡುಗಚ್ಚುತ್ತಾಳೆ.ಅವನು ಅದೆಂದೋ ರಮಿಸಿದ ರೀತಿಗೆ  ಇವಳ ಮನಸಿನಲ್ಲಿ ಎಂದೂ ನಿಲ್ಲದ ಕದಲಿಕೆಯೊಂದು ಮಿಡುಕುತ್ತಿದ್ದೆ.ಎಂದಿನದೋ ಹೃದಯದ ಗರ್ಭ ಹೊರಲು ಆಗದೇ  ಇಳಿಸೋಕೆ ಬಾರದೇ  ಕ್ಷಣ ಕ್ಷಣವೂ ತನ್ನ ಅಸ್ಥಿತ್ವವ  ಮಿಡಿಯುತ್ತಿದೆ.ಪಾಪ ಅವಳ ಕನಸನ್ನೊತ್ತ  ಧೋಣಿ ತೇಲಿತೋ ಮುಳುಗಿತೋ.. ಇನ್ಯಾವ ದಡವಾದರು ಸೇರಿಕೊಂಡಿತೋ? ಒಮ್ಮೆ ಮೀನುಗಾರನ ಗೆಳತಿ ಇಗಾ "ಹನಿಮುತ್ತುಗಳ ಕಡಲೊಡತಿ" ಆಗಿರುವ ಮಲ್ಲಿಯಂತು ಕಾಯುತ್ತಲೇ ಇದ್ದಾಳೆ. ದಡದ ಹೊಲಸುಗಳ ಮಧ್ಯೆ ನಿಂತು ಕಂಪು ಸೂಸುತ್ತ ಎಲ್ಲ ಕಂಪನಗಳ ಎದರಿಸುತ್ತ!
ಕವನ:
ಮುಸುಕು ಮುಸುಕಾಗಿ ಕಂಡ
ನನ್ನ ನಾಳೆಗಳಿಗೆ
ನಾಲಿಗೆ ದುಷಿಸಿದ್ದು
ಸೋತ ಮನವನಲ್ಲ
ಕಾಡಿಗೆ ಕಣ್ಣುಗಳನ್ನ

ಅಲ್ಲೊಂದು ಇಲ್ಲೊಂದು ಬೀಳೂ
ಬರಗಾಲದ ಹನಿಯಂತೆ
ಕೇಳದ ಗುಬ್ಬಿಯ ಚಿಲಿಪಿಲಿಯಂತೆ
ಅಪರೂಪಕೊಮ್ಮೆ
ಒಡಲ ಹಸಿ ಕನಸುಗಳು
ನಸು ನಕಿದ್ದವು

ಮನದೊಳಗೆ ಅರಳಿದ
ಮುತ್ತಿನ ನಗುವನ್ನೇ
ಪೋಣಿಸಿ ನೆನಪಾಗಿಸಿದರು
ಬಾಳಾ ನಾಳೆಯ ಪುಟವ
ಶೃಂಗರಿಸಿದ್ದು ಕೇವಲ
ಕಣ್ಣೀರ ಬಿಂದುಗಳು

ಪುಟ ತಿರುವಿದಾಗ ಕಂಡಿದ್ದು
ದಾರಿಯ ತುಂಬೆಲ್ಲಾ
ಕೊಟ್ಟ ಪ್ರೀತಿಯ ಸಾಲದ
ರಂಗು ರಂಗಿನ
ಹೆಜ್ಜೆಯ ಗುರುತು
ಮುನ್ನಡೆದದ್ದು ಮಾತ್ರ ಕೈಚೆಲ್ಲಿ
ಬರಿಗೈಯಲ್ಲಿ

ರೇಶಿಮೆಯ ಹುಳುವಿಗೆ
ನೋಡ ಸಿಗದ ನೈದ ರೆಶಿಮೆಯಂತೆ
ನನ್ ಎದೆಯ ಒಲವನ್ನು
ಕನಸಿನಿಂದ ನನಸಿನೆಡೆಗೆ
ರವಾನಿಸಿ
ನಾನು ನನಸೆಂಬ ಕನಸಿನೊಳಗೆ
ತಂಗಿಬಿಟ್ಟೆ!


ಅಂತ್ಯ:

ಮೆಲ್ಲ ಮೆಲ್ಲಗೆ
ಉಸಿರು ಸೋಕಿಸದಂತೆ
ಒಂದೊಂದೇ ಎಳೆಗಳ ಬಿಡಿಸಿ
ಗುಪ್ತಗಾಮಿನಿಯ ಅರಳಿಸಿ
ಮುತ್ತಿನಂತ ನಿನ್ನನ್ನಂದು, ನಾ
ಹುದುಗಿಸಿ ಇರಿಸಿದ್ದ
ಇಂಗದ ಕ್ಷೀರ ಸಾಗರವ,
ಗೆಲುವಿನ ನಗೆ ಬೀರಿ
 ಭೇದಿಸುತ್ತಾ,
ಕಾಲ ಕಾಲಕ್ಕೆ ಕೊಡಕದೆ
ಅವಶೇಷಗಳಂತಿದ್ದ
ಗೆದ್ದಲು ಹತ್ತದ,
ಚಿನ್ನದ ಕಣಗಳ ಕಣಜದ
ಧೂಳನೆಲ್ಲಾ,
ಉಸಿರಿನಲೆ ಕೆಣಕಿ ಹಿಯಾಳಿಸಿ
ನಿನ್ನ ಜೋಪಾನವಾಗಿ ಬಚ್ಚಿಟ್ಟಿದ್ದ
ಕಪ್ಪು ಹೊದಿಕೆಯ,
ಮೇಲೆಲ್ಲಾ  ನೂರನೇ ಬಾರಿ ಹುಡುಕಿಸಿದರು
ನೀ ಸಿಗಲಿಲ್ಲವಲ್ಲ ಗೆಳೆಯ!
ಮನಸು ಬಲಿತರೂ 
ಯುಗಗಳೇ ಸರಿದು 
ಕಣ್ಣಿಗೆ ಪೊರೆ ಬಂದರು
ನೀ ಇಂದೂ ಕಣ್ಣೊಳಗೆ
ನೆಲೆಸಿರುವೆಯಾದರು
ಬಿಂಬವಾಗಲ್ಲ
ನುಚ್ಚು ನೂರದ ಬಿಂಬದ ಧೂಳಾಗಿ
ನಿನ್ನನೆ ಅರಿಸುತ್ತಿದ್ದ ಎನ್ನೋಳಗಿಂದ
ಮತ್ತೊಮ್ಮೆ ನೀ ಜಾರಿ ಬಿದದ್ದು
ನೆನಪಿನ ಸಿಹಿ ಜೇನಾಗಲ್ಲ 
ನೋವಿನ ಹನಿ ಮುತ್ತುಗಳಾಗಿ 
ನೋವಿನ ಹನಿ ಮುತ್ತುಗಳಾಗಿ......

ಬ್ಲಾಗ್ ಶುರು ಮಾಡಿ ಎರಡು ತಿಂಗಳಾಯ್ತು,ನನ್ನ ಪ್ರಪ್ರಥಮ ಬ್ಲಾಗ್ ಪೋಸ್ಟ್ ಗೆ  ತಲುಪುವ ಲಿಂಕ್ ಕೆಳಗಿದೆ  :  http://vaishalisheshappa.blogspot.in/2012/11/blog-post.html#comment-form

9 comments:

  1. wow....reshime hula...geddalu hattada chinnada kanagalu...painful and thoughtful.keep writing!:-)

    ReplyDelete
    Replies
    1. ಅಭಿಪ್ರಾಯ ಓದಿ ಖುಷಿಯಾಯ್ತು.ಧನ್ಯವಾದಗಳು.:-)

      Delete
  2. ನಿಮ್ಮ ಪ್ರಪ್ರಥಮ postಅನ್ನೇ ಸಾಂಪ್ರದಾಯಕತೆಗೆ ಹೊರತಾದ ಗದ್ಯಸಹಿತ ಕವನದ ರೂಪದಲ್ಲಿ ಕೊಟ್ಟಿದ್ದೀರಿ. ಭಾವಪೂರ್ಣವಾದ ಬರವಣಿಗೆ. ನಿಮ್ಮಿಂದ ಇನ್ನೂ ಅನೇಕ ಕವನಗಳನ್ನು, ಬರಹಗಳನ್ನು ಎದುರುನೋಡುವೆ.

    ReplyDelete
    Replies
    1. ಕಾಕಾ ನಿಮ್ಮ ಪ್ರೋತ್ಸಾಹ ದೊಡ್ಡದು.:-)ಧನ್ಯವಾದಗಳು.ಅಂದಾಗೆ ಇದು ನನ್ನ ಚೊಚ್ಚಲ ಬ್ಲಾಗ್ ಬರಹವಲ್ಲ.ಅಲ್ಲಿಗೆ ತಲುಪುವ ಲಿಂಕ್ ಈ ಪೋಸ್ಟ್ ಕೊನೆಗೆ ಹಾಕಿದ್ದೀನಿ.:-)

      Delete
  3. Hey hogo entha yavaglu chenda barithiya... hogali hogali bejaarithu maraya... swalpa naadru thappu madu vandastu baiyuva....!!

    ReplyDelete
  4. ಕಂಡಿತ.ನಿಮಗೆ ತಪ್ಪು ಕಂಡರೆ ದಯವಿಟ್ಟು ತಿಳಿಸಿ.ತಿದ್ದಿಕೊಳ್ಳುತ್ತೀನಿ.ನಿಮ್ಮ ಅಭಿಮಾನಕ್ಕೆ ನನ್ನ ನಮನಗಳು.:-)

    ReplyDelete
  5. Munnudi,Kavana,Anthya ellavu sundaravagide kano... thumba ne istavaithu... Mathe mathe odabemkabastu istavaithu... Sheshuma too good kano...!! :)

    ReplyDelete
  6. eradu tingalalli ishtella baredubittiralla ansatte! tumba chennaagide, as usual. :)

    ReplyDelete
  7. ಹೇಳೋದನ್ನೆಲ್ಲ ಇನ್ ಬಾಕ್ಸ್ ನಲ್ಲಿ ಹೇಳಿ ಆಗಿದೆ.. ಬಹಳ ಹಿಂದೆಯೇ.. ಮಾತೆ ಹೇಳಬೇಕಾ..?? ಹೇಳ್ತೀನಿ.

    ಕವನ ತುಂಬಾ ಚೆನ್ನಾಗಿದೆ.. ನನಗೆ ಇಷ್ಟವಾಗುವ ಫಾರ್ಮಾಟ್. ಭರಪೂರ ಭಾವಗಳ ಸರಾಗ ಹರಿವು. ಪ್ರತಿಬಿಂಬ ಮಾತ್ರ ನೋವು.. ಥೇಟ್ ನನ್ನದೇ ಫಾರ್ಮಾಟ್. ಇಷ್ಟು ಸಾಕಾಗಲ್ವಾ ನಂಗೆ ಇಷ್ಟ ಆಗೋಕೆ..

    ಬರೀ ಇನ್ನು ಹೆಚ್ಚು ಬರಿ ಹೊಟ್ಟೆ ಕಿಚ್ಚು ಹೆಚ್ಚಾಗ್ತಲೇ ಇದೆ.. ಮತ್ತದರ ಹೊಟ್ಟೆಗೆ ಇಂಧನ ಹಾಕೋದನ್ನ ನಿಲ್ಲಿಸಬೇಡ ಅಷ್ಟೇ.. ;) ;)

    ReplyDelete