ಚಿತ್ರಕೃಪೆ:ಅಂತರ್ಜಾಲ |
ನಾನು ಹತ್ತಿರವಿದಷ್ಟು ಅವರ ಸುಖಿ ಮನಸಲ್ಲೊಂದು ಭಾರದ ಕಿಡಿ, ಸರೀ.... ಹೊಗೆಯಾಡಿಸುತ್ತಿತ್ತು,ಹತ್ತಿಕೊಂಡಿದ್ದು ಯಾವ ಯುಗದ್ದಲೆಂದು ಗೊತ್ತಾಗದೆ! ಅಧುನಿಕತೆಯೂ ಅದ ತಣ್ಣಾಗಾಗಿಸುವ ಉಪಕರಣ ಅವಿಷ್ಕಾರಿಸಲಿಲ್ಲ,ಅಮ್ಮ ಆಗಾಗ ನೀನು ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ ಅಂತ ನಲುಗುತ್ತಿದ್ದಳು.
"ನಾನು ಸದಾ ನಿಮ್ಮೊಂದಿಗೆ ಗುರುತಿಸಿಕೊಳ್ಳಬೇಕು,ನನ್ನ ಬಾಳ ಭಾನಿನ ಚಂದಿರ,ನೀನು ಮತ್ತು ಅಪ್ಪ" ನಾನು ಉಸುರಿದೆ ಕಟ್ಟಳೆಗಳ ಮುರಿದು,ಎಲ್ಲರಂತಾಗಳು ಒಪ್ಪದೇ.
"ಆ ಚಂದಿರನೂ ಅಂತರವಿಟ್ಟು ಕೊಂಡಿರುವನು ಮಗಳೇ ಅದುವೇ ಪ್ರಕೃತಿ ನಿಯಮ" ಅಮ್ಮ ಹನಿಯಾದಳು.
"ನಮ್ಮ ಕಾಲದನಂತರ ಗತಿಯೇನು?ಅಣ್ಣ ತಮ್ಮ ಅಕ್ಕ ಯಾರು ಆಗುವುದಿಲ್ಲ ನಿನಗಾಗ" ಅಪ್ಪ ಮೇಲಕ್ಕೆ ಕೋಪದಿ ಅರ್ಭಟಿಸಿದರು,ಒಳಗೊಳಗೆ ಮೆತ್ತಾದರು.
ಯಾರು ಆಗುವುದಿಲ್ಲವೇ?ಅದನ್ನರಿತವಳಲ್ಲವೇ ನಾನು....ಎಲ್ಲವ ಕಂಡಿದ್ದೆ,ಯಾರ ಸಾಮಿಪ್ಯದಲ್ಲೂ ಆ ವಾತ್ಸಲ್ಯ ದೊರಕುತ್ತಿರಲಿಲ್ಲ.ಸ್ನೇಹ ಪ್ರೀತಿಗಳೇನೋ ತೋಳು ಚಾಚಿದ್ದವು,ಆ ಅಪ್ಪುಗೆಯಲ್ಲಿ ನಾನು ಬರಡಾಗಿದ್ದೆನಷ್ಟೇ.
ಬಂಧು ಬಳಗದವರನ್ನು ಕೂಡಿಸಿದರು,ನಾನು ನನ್ನ ನಿರ್ಧಾರವನ್ನು ತಿಳಿಸಿದೆ,ನಾನಾಯ್ದ ಜೀವನವ ಘೋಷಿಸಿದೆ.ಒಬ್ಬ ಮಾವ ಮಾತ್ರ ಗಂಟಲೇರಿಸಲು ಮುಂದಾದ.ಮಿಕ್ಕವರು ಮಾತಾಡಿ ಸುಖವಿಲ್ಲವೆಂದು ಅದಾಗಲೇ ಜಾಗ ಕಿತ್ತಿದ್ದರು.
"ನೀನಿಲ್ಲದೆಯೂ ಜೀವಿಸುತ್ತಾರೆ ಅವರು.ನೀನು ಕೂಡ.ಮನುಷ್ಯ ಯಾವ ಸಂದರ್ಭದಲ್ಲೂ ಯಾರಿಲ್ಲದೆಯೂ ಜೀವಿಸಬಲ್ಲ..ಜೀವಿಸುವ ಕ್ರಿಯೆ ತಂತಾನೇ ಆಗುವಂತದ್ದು ಅದನ್ಯಾರೂ ತಡೆಯಾಲಾರರು" ಅಂದ.
"ನನ್ನದು ಜೀವಿಸುವ ಹಂಬಲವಲ್ಲ ಬಾಳುವ ಹಂಬಲ.ನಾನೀಗೆ ಇರಲು ಬಯಸುವೆ,ಮರಕ್ಕೆ ಆತುಕೊಂಡ ಬಳ್ಳಿಯಂತೆ,ಅಲ್ಲೇ ಗೂಡು ಕಟ್ಟುವ ಹಕ್ಕಿಯಂತೆ"
"ಹೀಗೆ ಇರುವೆಯೆಂದರೆ ಏನು ಅರ್ಥ? ಬೇಕಿದ್ದರೆ ಸನ್ಯಾಸಿನಿ ದೀಕ್ಷೆ ಪಡೆ,ಗೌರವದಿಂದ ನಡಿಸಿಕೊಳ್ಳುವರು"ನುಡಿದ ಧರ್ಮಕ್ಕಂಟಿಕೊಂಡವ.
ಹಾಗೆಲ್ಲ ಸನ್ಯಾಸಿನಿ ಆಗಿಬಿಡಲು ಹುಟ್ಟಿನ ಮೂಲವಾ ಸವಿಂದಾಚೆಗಿನ ಸತ್ಯವ ಹುಡುಕುತ್ತಾ ಹೊರಟವಲ್ಲಲ್ಲ ನಾನು.ಅದೆಲ್ಲ ಗಮ್ಯವಲ್ಲದು ನನ್ನ ಪಾಲಿಗೆ,ಆ ಕಾಣದವನ ಆರಾಧನೆಯಷ್ಟೇ.
ಕಾಣುವ ಅಪ್ಪ ಅಮ್ಮನ ಸೇವೆ ಮಾಡುತ್ತಾ ಜೀವ ಸವಿಸಲು ಬಿಕ್ಷುವಿನ ಮುಖವಾಡ ಬೇಕೇ?
ಇದೆಲ್ಲ ಕಂಡ ಅವನೊಬ್ಬ ನಿತ್ಯ ಅಣಕಿಸುತ್ತಾನೆ.ಅವನವರಿಗೆ ಕಣ್ಣಿರದಿದ್ದರು ಕಂಡಿತ್ತು,ನನ್ನವರೆಲ್ಲಾ ಕಣ್ಣಿದ್ದರು ಕುರುಡರಾದರು.ಕೆಟ್ಟ ಸತ್ಯಗಳಿಗೆಲ್ಲಾ ಕಣ್ಣಾದರೂ.
ಅಪ್ಪನ ಜವಾಬ್ದಾರಿಯ ಹೊರೆ,ಅಮ್ಮನ ಬಿಡದ ದುಗುಡ,ಸಮಾಜದ ವಿವಿಧ ಕರ್ಮಕಾಂಡಗಳ ಹೊತ್ತಿಗೆ ನನ್ನನು ಕುಗ್ಗಿಸಿತು. ನಾನೆಷ್ಟಾದರು ಅವರೆದುರು ಕ್ಷುದ್ರ'ಳಲ್ಲವೇ?? ಅವಕೆಲ್ಲಾ ಮಣಿದು ತಲೆ ಬಗ್ಗಿಸಿದೆ.ಜಾರಿದ ಬಿಂದುವನ್ನು ಅರಿಯುವಲ್ಲಿ ಕೈ ಹಿಡಿದವ ಸೋತ,ಎಲ್ಲರನ್ನೂ ಗೆಲ್ಲಿಸಲು ಹಿಡಿದ ಕೈಯನಿನ್ನು ಬಿಗಿ ಹಿಡಿದೆ.ಇಷ್ಟೆಲ್ಲಾ ಮಾಡುವಲ್ಲಿ ನಾನು ಹೆಣವಾಗಿದ್ದೆ ಎಲ್ಲರು ಇಗಾ ಹೆಣ್ಣಾದಳು ಎಂದು ಕೊಂಡಾಡಿದರು.
ಎಲ್ಲರಿಗೂ ಎಂದದಾರೊಮ್ಮೆ ಹೊಟ್ಟೆಕಿವುಚಿದಾಗ ಅನಿಸದೆ ಇರಲಾರದಂತೆ....ನನಗೂ ಅನಿಸಿತ್ತು,ನಾನೂ ಗಂಡಸಾಗಬೇಕಿತ್ತು! ಅವನಂತೆ ಆ ಶ್ರವಣನಂತೆ!
"ಅವಳನ್ನು ಹನಿಯಾಗಿಸಿ ಅಲ್ಲಿಂದ ತಂದರು,
ಇವಳನ್ನು ಹೂವಾಗಿಸಿ ಅಲ್ಲಿಗೆ ಕಳಿಸಿದರು...
ಒಳಗೊಳಗೆ ಉರಿದಳು,
ದೂರಕ್ಕೆ ಮಿನುಗಿದಳು..
ನಕ್ಷತ್ರ ಆಗಾ ಹೊರಟವಳು,
ಧೂಳ ಕಣಗಳ ಧೂಮಕೇತುವಾದಳು...
ಅಲಿಲ್ಲಿ ಅಲಿದು,
ಕೊನೆಗೊಮ್ಮೆ ಅವಳಂತೆಯೇ ಜಾರಿದಳು,
ತವರಿನ ಸೆಳೆತಕ್ಕೆ....
ತನ್ನನೇ ಬೂಧಿಯಾಗಿಸಿ,
ಜೀವಕೋಶಗಳ ಉಗಮವ ಪೋಷಿಸಿ
ಇಲ್ಲಿಯೇ ಸಮಾಧಿಯಾಗಳು ಆಶಿಸಿ..."
LIKED LIKED LIKED....!! :)
ReplyDeleteಬವಣೆ ಹೊತ್ತ ಈ ಉಲ್ಕೆ ಹುಡುಗಿ ಇಷ್ಟವಾದಳು.ಎಲ್ಲ ಬರಹಗಳು ಸೊಗಸಾಗಿವೆ.
ReplyDeleteತೀವ್ರವಾಗಿ ಬರೆಯುವ ಶೈಲಿ ನಿಮ್ಮದು, ಮುಂದುವರೆಸಿರಿ.
ReplyDelete"ನನಗೂ ಅನಿಸಿತ್ತು,ನಾನೂ ಗಂಡಸಾಗಬೇಕಿತ್ತು! ಅವನಂತೆ ಆ ಶ್ರವಣನಂತೆ!" ಎನ್ನುವ ನಿಮ್ಮ ಮಾತು ಓದಿದಾಗ ನನ್ನವಳು ಸುಮಾರು ವರ್ಷಗಳ ಹಿಂದೆ ನನಗೆ ಹೇಳಿದ ಮಾತು ನೆನಪಾಯಿತು.
"ಜೀವಕೋಶಗಳ ಉಗಮವ ಪೋಷಿಸಿ,ಇಲ್ಲಿಯೇ ಸಮಾಧಿಯಾಗಳು ಆಶಿಸಿ "
ReplyDeleteನಿಮ್ಮ ಕಾಡುವ ಸಾಲುಗಳಲ್ಲಿ ಇದೂ ಒಂದು.
ಹೌದು ಅಮ್ಮನಿಗೆ ಮಗಳು ಕೆಂಡದಂತೆ ಕಾಣುವ ಕಾಲ ಇನ್ನೂ ಮುಗಿದಿಲ್ಲ
ಮನವನ್ನು ಉದ್ವಿಗ್ನಗೊಳಿಸುವ, ತೀವ್ರ ಭಾವನೆಗಳ ಲೇಖನ. ಸೊಗಸಾಗಿದೆ.
ReplyDeleteವೈಶೂ... ನೀನ್ ಮಾತ್ರ ಬರೆಯಬಲ್ಲಂಥಹ ಎರಡು ಆಯಾಮಗಳನ್ನ ಹೊಂದಿರುವ ಬರಹ.
Deleteಮನದ ತುಮುಲ-ದುಗುಡುಗಳನ್ನ ಅಸಹಾಯಕಳಾಗಿ ನೋವಿನಿಂದ ಅನುಭವಿಸುವ ಒಂದು ಹೆಣ್ಣಿನ ಪಾತ್ರವನ್ನ, ಕ್ಶುದ್ರಗಹಕ್ಕೆ ಕೊಟ್ಟು, ದೂರದಲ್ಲೇ ನಿಂತು "ಬಿಡಿಸಲಾಗದ ಒಗಟಿನಂಥ " ತುಂಬಾ ಭಾರವಾದ ನಗುವನ್ನ ಹೊರಹೊಮ್ಮಿಸುವ ನಿನಗೆ ನಾನು ಏನ್ ಹೇಳಲಿ...?
ಒಂದು ಹೆಣ್ಣು ತನ್ನ ಮನದ ಆಸೆಗಳನ್ನ ವಾಸ್ತವದಲ್ಲಿ ಲೀನವಾಗಿಸುವ-ಕ್ಶುದ್ರಗ್ರಹವೊಂದು ಉಲ್ಕೆಯಾಗುವ ಆ "Transition-Period " ನ್ನ ತೀವ್ರವಾದ ಭಾವನೆಗಳೊಂದಿಗೆ ಹರಿಬಿಟ್ಟಿದ್ದೀಯ.
ಪ್ರತಿಯೊಂದು ಸಾಲುಗಳು ಕಾಡುತ್ತವೆ.
ಕೊನೆಸಾಲುಗಲಂತೂ .................
ವೈಶಾಲಿಯವರೆ,
ReplyDeleteಚೆನಾಗಿದೆ ಕಣ್ರೀ ಬರ್ದಿದ್ದು..
ಒಂಥರಾ ಬೇರೆ ಥರದ ಬರಹ ಇದು....
ಆ ಶಬ್ಧಗಳಿಗೆ ಮೀರಿದ ಭಾವನೆ ಇದೆ ಅನಿಸ್ತು..
ಮುಂದುವರೆಯಲಿ ಬರವಣಿಗೆ...
ನಮಸ್ತೆ :)
"ಏನೋ ಮಾಡಲು ಹೋಗಿ ಏನು ಮಾಡಿದೆ ನೀನು" ಏಳು ಸುತ್ತಿನ ಕೋಟೆಯ ಚಿತ್ರದ ಹಾಡು ನೆನಪಿಗೆ ಬಂತು...ಆಶಯ ಹೊತ್ತ ಕನಸಿನ ಉಪ್ಪಿನ ಮೂಟೆ ನೀರಲ್ಲಿ ಕರಗಿ ಹೋದಾಗ ಉಳಿದದ್ದು ಸೋರುವ ಗೋಣಿ ಚೀಲ...ಸುಂದರವಾದ ಲೇಖನ...ಅನೇಕ ಮಜಲುಗಳನ್ನು ತೆರೆದು ತೋರುವ ಪದಗಳ ಜೋಡಣೆ ಸೊಗಸಾಗಿದೆ..
ReplyDeleteವೈಶು .....
ReplyDeleteಸುಂದರ ಬರಹ...........
Yshu.........
ReplyDeleteSundara baraha, anisikegalu! Appreciate completely...
koneya saalugaLellavu mana seledide.
Would love to read more from you ......
- Roopa