ಚಿತ್ರಕೃಪೆ:- ಅಂತರ್ಜಾಲ |
ಮುಖಕ್ಕೊಂದು ಬೆನ್ನು
ಬೆನ್ನಿಗೆ ಸಾವಿರ ಮುಖ
ಬೆನ್ನಿಗೇ ಬೆನ್ನಚ್ಚಿ ಕೂತೆವಲ್ಲಾ
ಕಣ್ಣುಗಳು ಕಣ್ಣನ್ನೇ
ಕುಕ್ಕದೇ ಬಿಡುವುದೆನಯ್ಯ?
ಊರಿಗೆ ಕೇರಿಗೆ
ಝಗಮಗಿಸೋ ನಸುಕಿನ ನಾಡಿಗೆ
ಪ್ರವಾಹವದು ಬಡಿದಿಹುದು
ಸೊಂಕೊಂದ ತಂದಿಹುದು
ಕಂಗೆಟ್ಟ ದಾರಿಯಿದು
ಮುಸುಕಿನಲಿ ಸಾಗಿಹುದು,ಹಿತ್ತಲ ಗಿಡದಾಶ್ರಯಕೆ
ಇಲ್ಲಿಯ ರೋಗಗ್ರಸ್ತ ಹಿತ್ತಲಿಗೆ
ಯಾವ ಬೇರಿನ ಮದ್ದಯ್ಯ?
ಪ್ರಕೃತಿಯ ಸೆರಗಿನಲಿ
ವಿಕೃತಿಯು ಅವಿತಿಹುದು
ಭೇದಕ್ಕೆ ಏನಿಹುದು ಮಾನದಂಡ
ಕಡೆಯಿಲ್ಲದ ಪಂಚೀಗಳು
ಬಾಯಿಲ್ಲದ ಹಂಸಗಳು
ಅಳೆಯಲಿಕೆ ಎಲ್ಲಿಹುದು ನ್ಯಾಯದಂಡ
ನಂಬಿದ ವಿಹಂಗಮ ಧೂತರೆಲ್ಲಾ
ಯಾರ ದನಿಗೆ ಕಾದಿಹರಯ್ಯ?
ದ್ವಾಪರ ತ್ರೇತಗಳೆಲ್ಲ ಅವನದೆಂದು ಬೀಗದಿರಿ
ಈ ಆಟವು ಅಂದಿನಂತಿಲ್ಲ ,ನಿಯಮವು ಎಂದಿನಂತಿಲ್ಲ
ಲೋಕದ ಕಾಳಿ ಕಲಿಗಳೇ ಅಂತ್ಯಕ್ಕೆ ಕೂಡುವರು
ದಿಕ್ಕಿಲ್ಲದ ಕೋಣೆ ಕೋಣೆಗಳ ಕತ್ತಲಿಂದಲೇ
ಉದ್ಭವಿಸುವಳು ಅವಳು
ಸದೆಬಡೆದು ಪಳಗಿಸುವಳು ನಿಮ್ಮಯ ಪೌರುಷವ
ಪ್ರದರ್ಶನಕಿಟ್ಟೀರಿ ಜೋಕೆ ಅಮಾನುಷ
ಪುರುಷತ್ವವ.
ಈ ಆಟವು ಅಂದಿನಂತಿಲ್ಲ ,ನಿಯಮವು ಎಂದಿನಂತಿಲ್ಲ
Good one vaishu...keep writing!
ReplyDeleteವೈಶೂ ನಂಗೆ ಏನ್ ಹೇಳಬೇಕು ಅಂತಾನೆ ಗೊತ್ತಾಗ್ತಿಲ್ಲ.ಆಂಗ್ಲ ಮಾಧ್ಯಮದ ವಿಧ್ಯಾರ್ಥಿನಿ ಕನ್ನಡದಲ್ಲಿ ಈ ಲೆವೆಲ್ಲಿಗೆ ಬರೆದಿರೋದಕ್ಕೆ ನಿಜಕ್ಕೂ ತುಂಬಾ ಖುಷಿ ಆಯ್ತು. "ಕಲಿಯುಗದ" ಬಗ್ಗೆ, ಕಲಿಯುಗದ ಅಷ್ಟೂ ಅನ್ಯಾಯ ಅಸಹಾಯಕತೆ, ಅರಾಜಕತೆ ಗಳ ಬಗ್ಗೆ, ಇಷ್ಟೊಂದು ಪರಿಣಾಮಕಾರಿಯಾಗಿ, ಒಂದೇ ಸಣ್ಣ ಕವನದಲ್ಲಿ ಹೇಳುವುದು ಅಂದ್ರೆ, ಎಂಥೆಂಥ ಘಟಾನುಘಟಿಗಳಿಗೂ ಕೂಡಾ ಕಷ್ಟವೇ. ಪ್ರತಿಯೊಂದು ಪದವೂ, ಪ್ರತಿಯೊಂದು ಸಾಲು ಕೂಡಾ ಇನ್ನಿಲ್ಲದಂಥಹ ತೀವ್ರತೆಯನ್ನ ಬೀರುತ್ತವೆ.
Deleteಮುಖಕ್ಕೊಂದು ಬೆನ್ನು
ಬೆನ್ನಿಗೆ ಸಾವಿರ ಮುಖ
ಬೆನ್ನಿಗೇ ಬೆನ್ನಚ್ಚಿ ಕೂತೆವಲ್ಲಾ ....... ೩ ಸಾಲಿನಲ್ಲೇ ಜನರ ಮುಖವಾಡಗಳ ಬಣ್ಣಗಳನ್ನೇ ತೊಳೆದು ಬಿಟ್ಟೆ :d
.
ಇಲ್ಲಿಯ ರೋಗಗ್ರಸ್ತ ಹಿತ್ತಲಿಗೆ
ಯಾವ ಬೇರಿನ ಮದ್ದಯ್ಯ?....... ಎಂದೂ ವಾಸಿಯಾಗದ ಈ ವ್ಯವಸ್ಥೆಯ ಅವಸ್ಥೆಯನ್ನ ೨ ಸಾಲಿನಲ್ಲೇ ಕುಟುಕಿದ್ದಿಯಾ :)
.
ಭೇದಕ್ಕೆ ಏನಿಹುದು ಮಾನದಂಡ
ಕಡೆಯಿಲ್ಲದ ಪಂಚೀಗಳು
ಬಾಯಿಲ್ಲದ ಹಂಸಗಳು
ಅಳಿಯಲಿಕೆ ಎಲ್ಲಿಹುದು ನ್ಯಾಯದಂಡ
ನಂಬಿದ ವಿಹಂಗಮ ಧೂತರೆಲ್ಲಾ
ಯಾರ ದನಿಗೆ ಕಾದಿಹರಯ್ಯ?........... ಸತ್"ಪ್ರಜಾ" ಸಮಾಜದ ಕಿವಿ ಹಿಂಡಿದ ಸಾಲುಗಳು ಹಿಡಿಸಿದವು :d
.
ದ್ವಾಪರ ತ್ರೇತಗಳೆಲ್ಲ ಅವನದೆಂದು ಬೀಗದಿರಿ
ಈ ಆಟವು ಅಂದಿನಂತಿಲ್ಲ ,ನಿಯಮವು ಎಂದಿನಂತಿಲ್ಲ.......... ಇದರ ಬಗ್ಗೆ ನೀನ್ ಹೇಳು, "ನನಗಿದು "ಸೆಟ್" ಆಗಲ್ಲ ಹೇಳೋಕೆ :d
.
ದಿಕ್ಕಿಲ್ಲದ ಕೋಣೆ ಕೋಣೆಗಳ ಕತ್ತಲಿಂದಲೇ
ಉದ್ಭವಿಸುವಳು ಅವಳು........... ಹೌದು ಲೇ...... ಹಾಗೆ ಆಗುತ್ತೆ. :) ಆಗ್ಬೇಕು ಕೂಡಾ :p [ಈ ಸಾಲುಗಳು ಇಷ್ಟಾ ಆದವು]
.
.
Finally , ನೀನೆ ಹೇಳೋ ಹಾಗೆ,
ಈ ಆಟವು ಅಂದಿನಂತಿಲ್ಲ ,ನಿಯಮವು ಎಂದಿನಂತಿಲ್ಲ............
ಸದ್ಯಕ್ಕೆ ನನ್ ಜೇಬಲ್ಲೂ ದುಡ್ಡಿಲ್ಲಾ. ಸೈಬರ್ ಕಫೆ ಲೀ ಕೊಡೋಕೆ. :d
ವಚನಗಳನ್ನು ನೆನಪಿಸುವ ಶೈಲಿ...
ReplyDeleteಬರೆಯುತ್ತಿರಿ...
I read it once again....hosa arthagalu sigutide.hats off liked the way u articulated it.thank you.keep it up.
ReplyDeleteಹೊಸತಾದ ಭಾವನೆಗಳನ್ನು, ವಿಷಯವನ್ನು ನಿಮ್ಮದೇ ಆದ ಹೊಸ ಶೈಲಿಯಲ್ಲಿ ಬರೆದಿದ್ದೀರಿ. ಇದು ಪ್ರಶಂಸನೀಯ.
ReplyDeleteನಿಜ, ಕಾಲ ನದಲಾದಂತೆ 'ರೂಲು'ಗಳೂ ಬದಲಾಗಿವೆ. ಈಗ ಅದು ಹೇಗೆ ಗೆಲ್ಲಲಿ - ಗೆಲ್ಲುವುದೇ ಅಂತಿಮ!
ReplyDeleteನಾಲ್ಕು ಕಾಲಕ್ಕೂ ನಿಲ್ಲುವಂತ ಹೂರಣವಿರುವ ಕವನವಿದು.
ವೈಶು ಮತ್ತೊಂದು ವಿಭಿನ್ನ ಮತ್ತು ಸಶಕ್ತ ಸಂದೇಶವುಳ್ಳ ಕವನ.ತುಂಬಾ ಚೆನ್ನಾಗಿ ಬರೆದಿದ್ದೀಯ. ರಾಘ ಹೇಳಿರೋದನ್ನೇ ನಾನು ಹೇಳ್ಬೇಕು ಅಂತಿದ್ದೆ. ಹಾಗೆ ಮಾಡಿದ್ರೆ ಮಕ್ಕಿ ಕಾ ಮಕ್ಕಿ ಆಗೋಗತ್ತೆ. its really nice.. waiting for some more.. :)
ReplyDelete