Sunday, December 16, 2012

ಸ್ಪೂರ್ತಿ

ಮೊನ್ನೆ ಕನಸಿನಲ್ಲಿ ನನ್ನ ಮೊದಲನೇ ಮಗು ಬಹಳ ನೊಂದುಕೊಂಡಿತ್ತು ...."ಮಾವಿನ ಮರವೇ ಮಾವಿನ ಮರವೇ ನನ್ನ ಮರೆತೆಯ" ಹಿನ್ನಲೆ ಗೀತೆಯೊಂದಿಗೆ!ಅರೆ ಇದ್ಯಾವ ಮಗು ಇವಳಿಗೆ  ಎಂದು ಗಾಬರಿಯಾಗಬೇಡಿ...  ಅದೇ ನಾ ಕನ್ನಡದಲ್ಲಿ ಬರೆದ ಮೊದಲ ಕವನ ಮತ್ತೆ ಕಾಡುತಿದೆ.ಮೊನ್ನೆ ಜಸಿಂತ ಎಂಬ ದೇಶೀ ಮೂಲದ ಮಹಿಳೆ ಇಂಗ್ಲಂಡಿನಲ್ಲಿ  ಆತ್ಮಹತ್ಯೆ ಮಾಡಿಕೊಂಡ ಸಾವನಪ್ಪಿದ ಸುದ್ಧಿ ಕಿವಿಗೆ ಬಿದ್ದಾಗಳಿಂದ.ಈ ಆತ್ಮಹತ್ಯೆಗಳು  ಪೂರ್ವನಿಯೋಜಿತವಾಗಿದ್ದರೂ,ಅದಕ್ಕೆ ತಯ್ಯಾರುಗೊಳಿಸುವ ಸಂದರ್ಭಗಳು ಮಾತ್ರ ಅನಿರೀಕ್ಷಿತವಾಗಿ ಎರಗುವಂತವು.ಅದ ಸಂಭಾಳಿಸಲಾಗದವರ ಬದುಕಿನಲ್ಲಿ  ಇಂತಹ ದೃಷ್ಟಾಂತಗಳು ಜರಗಿಬಿಡುತ್ತವೆ.ವರ್ಷಗಳ  ಹಿಂದೆ ನನ್ನ ಸ್ನೇಹಿತೆಯೊಬ್ಬಳು ಆತ್ಮಹತ್ಯೆಗೆ ಬಲಿಯಾದಳು.ಅದೇ ವಾರದಲ್ಲಿ ಅವಳ ಹುಟ್ಟುಹಬ್ಬದ ಟ್ರೀಟ್ ಪ್ಲಾನ್ ಮಾಡಿದ್ದ ನಮಗೆ ಸುದ್ಧಿ  ಅರಗಿಸಿಕೊಳ್ಳಲಾಗಲಿಲ್ಲ.ಹೊರ ನೋಟಕ್ಕೆ ಗಟ್ಟಿಗಿತ್ತಿಯೆನಿಸಿಕೊಂಡಿದ್ದ  ಅವಳು ಮಾನಸಿಕವಾಗಿ ಅಷ್ಟೊಂದು ದುರ್ಬಲಳಾಗಿದ್ದಳು ಅನ್ನೋದ ನಂಬಲು ಅಸಾಧ್ಯವೆನಿಸಿತ್ತು ನಮಗೆ.ಆಗಲೇ ಅರಿವಾಗಿದ್ದು  ಆತ್ಮಹತ್ಯೆ ಮಾಡಿಕೊಳ್ಳುವವರು ದುರ್ಬಲ ಮನಸ್ಕರಾಗಿರುವುದಿಲ್ಲವೆಂದು.ನಿಜಸ್ಥಿತಿಯಲ್ಲಿ   ಅವರು ತಮ್ಮ ದೃಢ ಮನಸನ್ನು ನಕಾರಾತ್ಮಕ ಯೋಜನೆಗೆ ಬಳಿಸಿ ಕೊಂಡಿರುತ್ತಾರಷ್ಟೇ.ಸಾಯುವುದಕ್ಕೆ ಸಂಗ್ರಹಿಸುವ ಸಮಗ್ರ ಧೈರ್ಯದಲ್ಲಿನ  ಶೇಕಡ ೧೦ ಪಾಲರಷ್ಟು ಬದುಕಲಿಕ್ಕಾಗಿ ಅಹ್ವಾನಿಸಿಕೊಂಡರೆ  ಎಂತಹ ಕಷ್ಟಗಳನ್ನಾದರು  ಸಮರ್ಥವಾಗಿ ಎದುರಿಸಬಹುದು.ನಮ್ಮನಗಲಿದ  ಸ್ನೇಹಿತೆಯ  ಹುಟ್ಟುಹಬ್ಬದಂದು ಅವಳಿಗೆ ವಿಶಿಷ್ಟ ರೀತಿಯಲ್ಲಿ  ಶ್ರದ್ದಾಂಜಲಿ ಸಲಿಸುವ ಸಲುವಾಗಿ ಅಶ್ರಮವೊಂದಕ್ಕೆ ಭೇಟಿ ನೀಡಿದ್ದೆವು.ಸಾಯುವ ಮುನ್ನ ಅವಳು ಈ ಜಾಗಕ್ಕೆ  ಒಮ್ಮೆ ಬಂದಿದ್ದರೆ ಮಕ್ಕಳೊಂದಿಗೆ ಬೆರೆತಿದ್ದರೆ ಅಂಥದೊಂದು ದುರ್ಘಟನೆ ಆಗುತಿರಲಿಲ್ಲವೇನೋ ಅನ್ನೋ ಮಟ್ಟಿಗೆ ಅಲ್ಲಿನ ವಾತಾವರಣ ಮಕ್ಕಳು ನಮ್ಮ  ಮೇಲೆ ಪ್ರಭಾವ  ಬೀರಿದರು.ಅವರೊಡನೆ ಕಳೆದ ಕ್ಷಣಗಳು ಚಿರಸ್ಮರಣೀಯ ಅವಿಸ್ಮರಿಣೀಯ.ನಾನು ಕನ್ನಡದಲ್ಲಿ  ಬರೆದ ಈ ಮೊದಲ ಕವನಕ್ಕೂ ಅಲ್ಲಿನ  ಮಕ್ಕಳೇ  ಸ್ಪೂರ್ತಿ.ಈ ಹಿಂದೆ ಬರಿ ಇಂಗ್ಲಿಷ್ನಲ್ಲಿ ಬರಿತಿದ್ದೆ...ಇಗಾ ಮೊದಲು ಕನ್ನಡದಲ್ಲಿ ಬರೆದು ನನ್ನ ಕನ್ನಡೇತರ ಸ್ನೇಹಿತರು ಒತ್ತಾಯಿಸಿದರೆ ಇಂಗ್ಲಿಷ್ನಗೂ  ಭಾಷಾಂತರಗೊಳಿಸುತ್ತೇನೆ.
ಮತ್ತೀ ಕವನದಲ್ಲಿ ವಿಶಿಷ್ಟತೆಯೇನಿಲ್ಲ  ಹೆತ್ತ ನನಗೆ ಮೊದಲ ಮಗುವಿನ ಮೇಲೆ ಕೊಂಚ ಹೆಚ್ಚಿಗೆ ಪ್ರೀತಿ,ಎಲ್ಲಾ  ಮೊದ ಮೊದಲುಗಳೇ ಹಾಗಲ್ಲವೇ? ಮನಸಿನಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಳ್ಳುತ್ತವೆ.ಅದಿಲ್ಲದೆ ನನ್ನ ಬ್ಲಾಗ್ ಅಪೂರ್ಣ ಅನಿಸತೊಡಗಿದೆ,ಆದರಿಂದ ಕವನದ ಯಾವ ರೂಪುಲಕ್ಷಣಗಳಿಲ್ಲದ  ನನ್ನ ಮೊದಲ ಕವನವನ್ನ ಅದರ ಇಂಗ್ಲಿಷ್ ಅವತರಣಿಕೆ ಜೊತೆಗೆ ಪ್ರಕಟಿಸುತ್ತಿದೇನೆ.
                                               ಸ್ಪೂರ್ತಿ (Awakening of the inner hope)
ಚಿತ್ರಕೃಪೆ : ಅಂತರ್ಜಾಲ
        

ಅದು ಬೇಸಿಗೆಯ ಮಧ್ಯಾನ,                                                "It was a Sunny noon and
ಎಲ್ಲೆಲ್ಲೂ ಉರಿಬಿಸಿಲು                                                        summer sun played its role
ಮನದಲ್ಲೇಕೋ ತುಂಬಿತ್ತು,                                                 But d gloomy dark clouds
ಮಳೆಯ ಕಾರ್ಮುಗಿಲು                                                  inside,captured the soul                                  
ಹೆಪ್ಪುಗಟ್ಟಿತ್ತು ನೋವು,                                                      The waves of pains n  disappointments
ನಿರಾಸೆಗಳ ಅಲೆ                                                              entrapped,freezed well
ಅದಾಗಲೇ ಹೆಣೆದಿದ್ದ ಜವರಾಯ,                                         Standing blue,the lord of death
ತನ್ನ ಬಲೆ                                                                       seemed to had casted his spell

ಸೋಲುಗಳು ನಿರ್ಧರಿಸಿದವು ಜೀವನದ,                                Defeats decided the new path
ಮುಂದಿನ ನಡೆ                                                                of life,deprived of smiles
ಚಿತೆಯೇರಲು ಬಯಸಿದ್ದ ತನು ನಡೆದಿತ್ತು ರೈಲು,                    The body craving for its grave,
ಕಂಬಿಯ ಕಡೆ                                                                 led towards the rails

ಬಾಳಿನ ಕೊನೆಯ ಕ್ಷಣವನ್ನು ಎಣಿಸುತ್ತ ಕುಳಿತಿದ್ದೆ,                   There i was seated counting
ಅಲ್ಲಿ ನಾನಂದು                                                               life's last moments with fraility
ಹಿಂದಿನಿಂದ ತಲೆಗೆ ಬಡಿದಿತ್ತು,                                            When a pebble came hitting,my
ಸಣ್ಣ ಕಲ್ಲೊಂದು                                                               back like a bolt from the blue wit velocity

ತಿರುಗಿ ಏನೆಂದು ನೋಡಲು ಕಂಡ,                                    Turning ma head in anguish,
ಆ ಹುಡುಗ                                                                     i found  a lil boy ...
ಆಡುತಾ ನಲಿಯುತಾ ಬಳಿ ಬಂದ,                                      who smiled n came hopping
ಆ ಸೊಬಗ                                                                    to me spoiling death's ploy!

ಆ ಮುದ್ದು ಮುಖವನು ನೋಡಿ ಮರಳಿತು,                           The  innocent sight of his,
ಕಿರುನಗು ಮೊಗದಲ್ಲಿ                                                      returned a smile on ma lip
ಇವನ್ಯಾರು?ಇಲ್ಲಿಗೇಕೆ ಬಂದನೆಂಬ,                                    Deep in me,Who is he? Y is he here?
ಕೂತುಹಲ ಕಣ್ಣಲ್ಲಿ                                                           curious questions flip
ತಿಂದಿತ್ತಂತೆ ಮಹಾಮಾರಿಯೊಂದು,                                 Here he stood,enstranged by
 ಅವನ ಸಂಬಂಧಿಕರನ್ನು                                                 all relations...
ಕ್ಷಣ ಬೆರಗಾದೆ ಕೇಳಿ ಅವನಾಡುತಿದ್ದ,                                 Bleak and empty yet in solitude
ಜೀವನುತ್ಸಾಹದ ಮಾತುಗಳನ್ನು                                  His eyes glared wit hopes to conquer the world,
                                                                                I was moved,as his story unfold

ಚಿಗುರೊಡೆಯಿತು ಇನ್ನೊಮ್ಮೆ ನನ್ನೊಳಗಿದ್ದ,                       The child i met,sprouted a
ಮಗುವಿನ ಮನಸು                                                        seed of his heart in me,
ನೆನಪಾಯಿತು  ಅಪ್ಪ -ಅಮ್ಮ ನನಗಾಗಿ,                             I remembered greener days of life
ಕಂಡ ಕನಸು                                                                Parents n their dreams for me

ಅರಿವಾಗಿತ್ತು ನನ್ನ ದುಡುಕು ನಿರ್ಧಾರವು,                           As the hibernation died...ma
ಅಷ್ಟರೊಳಗೆ                                                            Soul awakened and a ray of hope brightened
ಮರಳಿ ಹೆಜ್ಜೆ ಹಾಕಿದೆ ಮಮತೆ ತುಂಬಿದ,                           I Passed through the streets,i had
ಬೆಚ್ಚನೆಯ ಗೂಡಿನಕಡೆಗೆ                                               sweared i would never return to
ವಿಧಿಯನ್ನು ತಿರುಚಿ.......                                                Twisting the fate,killing the
ಗೆಲುವನ್ನು ಬಯಸಿ ......                                                decision made in haste........7 comments:

 1. ವೈಶು,
  ತುಂಬ ಸುಂದರವಾದ, ಜೀವನದ ಆಸೆಯನ್ನು ಚಿಗುರಿಸುವ ಕವನ. ಕನ್ನಡ ಪದ್ಯ ಹಾಗು ಇಂಗ್ಲಿಶ್ ಅನುವಾದಗಳೆರಡೂ ಚೆನ್ನಾಗಿವೆ. ಪದಗಳ ಸಮುಚಿತ ಬಳಕೆ ಈ ಕವನಗಳ ವಿಶೇಷತೆ ಎನ್ನಬೇಕು.

  ReplyDelete
 2. Haudu Sunaath...!! Thumbaa chennagidhe Sheshuma.... :)

  ReplyDelete
 3. ಬದುಕು ಮತ್ತು ಬದುಕಿನೆಡೆಗೆ ನಡೆ..ಇದರ ಮಧ್ಯೆ ಅಂತರ ತುಂಬಾ ತೆಳ್ಳನೆಯ ಪರದೆ..ಅದನ್ನ ಹರಿದು ಮುಂದೆ ಸಾಗಬೇಕು..ಒಂದು ಕ್ಷಣದ ಯೋಚನೆ ಹಲವು ಯಾತನೆಗಳಿಗೆ ಪೂನ ವಿರಾಮವಿಡಬಹುದು..ಯಾವ ಕಡೆ ಹೋಗಬೇಕು ಎನ್ನುವ ಆಯ್ಕೆಯಷ್ಟೇ ಉಳಿಯುವುದು...ಆಶಾಕಿರಣ ಮೂಡಿಸುವ ಲೇಖನ..ಕವಿತೆ..ಅದರ ಅನುವಾದ ಮತ್ತು ಅದಕ್ಕೆ ಮುನ್ನುಡಿಯಾಗಿ ಬಂದ ಮಾತುಗಳು ಒಂದಕ್ಕೊಂದು ಸರಿಯಾಗಿ ಹೊಂದಿಕೊಂಡಿದೆ. ಅಭಿನಂದನೆಗಳು

  ReplyDelete
 4. ಮೇಡಮ್,
  ಹೊಸ ತರಹದ ಪ್ರಯೋಗ...
  ಕನ್ನಡ-ಇಂಗ್ಲೀಷು ಎರಡನ್ನೂ ಒಟ್ಟಿಗೆ ಬರೆದ ಬ್ಲಾಗು ನೋಡಿರಲಿಲ್ಲ...
  ಚೆನಾಗಿದೆ...
  ಬರೆಯುತ್ತಿರಿ..
  ಹಾಂ ಅಲ್ಲಿ world ಪದ ಈ ಕಡೆ ದಾರಿತಪ್ಪಿ ಬಂತೇನೋ ಅನಿಸ್ತಾ ಇದೆ..
  ಒಂದ್ ಸ್ವಲ್ಪಾ ನೋಡಿ...
  ಬರಿತಾ ಇರಿ...
  ನಮಸ್ತೆ.

  ReplyDelete
 5. ವೈಶಮ್ಮ ನಿಮ್ಮ ಕವಿತೆ ತುಂಬಾ ಚೆನ್ನಾಗಿದೆ.ಪದಗಳ ಬಳಕೆ ತುಂಬಾ ಇಷ್ಟ ಆಯ್ತು
  ಆತ್ಮ ಹತ್ಯೆ (ಆತ್ಮವನ್ನ ಹತ್ಯೆ ಮಾಡಲಾಗದೆಂಬುದು ಇನ್ನೊಂದು ಸತ್ಯ) ಮಹಾಪಾಪ
  ಎನ್ನೋ ದನ್ನ ಕೆಲ ಮನಸುಗಳು ಒಪ್ಪವು. ದುರಂತವೆಂದರೆ ನೆನ್ನೆ ಮನೆಯ ಮುದುಕರೊಬ್ಬರು ಹೀಗೆ ಹೋಗಿಬಿಟ್ಟರು.
  ನಿಮ್ಮ ಈ ಬರಹ ನೋಡಿದೆ . ನಿಮ್ಮ ಗೆಳತಿಗೆ ಶಾಂತಿ ಸಿಗಲಿ

  ReplyDelete
 6. ವೈಶು,

  ಈ ಕವನವನ್ನು ಮೊದಲು ನೀನು ನನಗೆ ತೋರಿಸಿದ್ದಾಗ ನಾನು ಇದು ನಿನ್ನ ಮೊದಲ ಕವನವಾ, ಅನ್ನಿಸೋದೇ ಇಲ್ಲ, ತುಂಬಾ ಚೆನ್ನಾಗಿದೆ ಎಂದಿದ್ದೆ...... ಜೀವನದ ಎಲ್ಲಾ 'ಮೊದಲುಗಳು' ನಮಗೆ ಯಾವಗಲೂ ಇಷ್ಟವಾಗಿರುತ್ತವೆ...ಮೊದಲ ಶಾಲೆ, ಮೊದಲ ಗುರು ಮೊದಲ ಪ್ರೀತಿ.....ಹೀಗೆ ಹಲವು ಮೊದಲುಗಳು......... ಇದು ನಿನ್ನ ಮೊದಲ ಕವನವಾದರೂ ತುಂಬಾ ಸೊಗಸಾಗಿದೆ....

  ಕನ್ನಡ, ಇಂಗ್ಲಿಷ್ ಎರಡರಲ್ಲೂ ಚೆನ್ನಾಗಿದೆ.... ಆಶಾವಾದವಿರುವ ಕವನ....ಚಿತ್ರ ಹಾಗೂ ಮುನ್ನುಡಿಯೂ ಚೆನ್ನಾಗಿದೆ......

  Keep writing

  ReplyDelete
 7. ಅತ್ಯಂತ ಸ್ಪೂರ್ತಿದಾಯಕ ಬರಹ.

  ಮೊದಲ ಪರಿವಿಡಿ ನಂತರದ ಕನ್ನಡ ಮತ್ತು ಇಂಗ್ಲೀಷ್ ಕವಿತೆಗಳು ತುಂಬಾ ಮೆಚ್ಚುಗೆಯಾದವು.

  "ಚಿಗುರೊಡೆಯಿತು ಇನ್ನೊಮ್ಮೆ ನನ್ನೊಳಗಿದ್ದ,
  ಮಗುವಿನ ಮನಸು
  ನೆನಪಾಯಿತು ಅಪ್ಪ -ಅಮ್ಮ ನನಗಾಗಿ,
  ಕಂಡ ಕನಸು"

  ನಿಮ್ಮಂತ ಗಟ್ಟಿ ಕವಿಯತ್ರಿ ಬೇಕಿತ್ತು.

  ReplyDelete